Source text in English |
Winning entries could not be determined in this language pair.There were 2 entries submitted in this pair during the submission phase. Not enough entries were submitted for this pair to advance to the finals round, and it was therefore not possible to determine a winner.Competition in this pair is now closed. |
ಒಂದಿಷ್ಟು ಮಧ್ಯಮ ವರ್ಗದ ಕುಟುಂಬಗಳಿಗೆ ಸೂರು ಕಲ್ಪಿಸಿರುವ ಬಹು ಮಹಡಿ ವಸತಿ ಸಂಕೀರ್ಣದ ಸಣ್ಣ ಅಪಾರ್ಟ್ಮೆಂಟ್ನಲ್ಲಿ ನಾವು ವಾಸಿಸಿದ್ದೇವೆ. ಆದರೆ, ನಮ್ಮ ವಸತಿ ಸಂಕೀರ್ಣವನ್ನು ಬಹಳ ಇಷ್ಟಪಡುತ್ತಿರುವ ಬೆಕ್ಕುಗಳ ಸಂಖ್ಯೆ ಬಹುಶಃ ಮಾನವರ ಸಂಖ್ಯೆಯನ್ನೂ ಮೀರಿಸಬಹುದು. ಏಕೆಂದರೆ ಹಿಂದಕ್ಕೆಳೆದುಕೊಳ್ಳಬಹುದಾದ ಪಂಜಗಳನ್ನು ಹೊಂದಿರುವ ಮತ್ತು ತಮ್ಮ ಸೋದರ ಸಂಬಂಧಿಗಳಾದ ಸಿಂಹ, ಹುಲಿ, ಕಾಡುಬೆಕ್ಕು ಮತ್ತು ಚಿರತೆಗಳ ಬಗ್ಗೆ ಜಂಭ ಕೊಚ್ಚಿಕೊಳ್ಳಬಹುದಾದ ಈ ಚತುಷ್ಪಾದಿಗಳು ನಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಯಾರಿಗೂ ಹೆದರುವುದಿಲ್ಲ. ಒಂಭತ್ತು ಜನ್ಮಗಳನ್ನು ಹೊಂದಿವೆ ಎಂದು ನಂಬಲಾಗುವ ಬೆಕ್ಕುಗಳ ಹೆಚ್ಚುತ್ತಿರುವ ಸಂತತಿ ಎಲ್ಲರಿಗೂ ಕಳವಳ ಉಂಟುಮಾಡುತ್ತದೆ ಆದರೆ ಹಲವರಿಗೆ ವಿನೋದವನ್ನೂ ನೀಡುತ್ತದೆ. ನಮ್ಮ ವಸತಿ ಸಂಕೀರ್ಣದಲ್ಲಿರುವ ಈ ಬೆಕ್ಕುಗಳು ತಮ್ಮ ಪ್ರದೇಶದ ಬಗ್ಗೆ ಕಟ್ಟುನಿಟ್ಟಾದ ಗಡಿ ಗುರುತುಗಳನ್ನು ಹೊಂದಿವೆ. ನೆಲಮಹಡಿ, ಮೊದಲ ಮತ್ತು ಎರಡನೇ ಮಹಡಿಯ ಬೆಕ್ಕುಗಳು, ತೀವ್ರ ಹಸಿವೆಯಾದಾಗ ನಿಯಂತ್ರಣ ರೇಖೆಯಾಚೆಗಿನ ಅಡುಗೆಮನೆಗಳತ್ತ ಆಕರ್ಷಣೆ ಹುಟ್ಟದ ಹೊರತು ತಮ್ಮ ಮಹಡಿಗಳಲ್ಲೇ ಇರುತ್ತವೆ. ಟೆರೇಸ್ ಅನ್ನು ಅನನ್ಯವಾಗಿ ಮರಿಗಳಿಗೆ ಮೀಸಲಿಡಲಾಗಿದೆ ಮತ್ತು ಉಳಿದವಕ್ಕಿಂತ ಸಮೃದ್ಧವಾಗಿರುವ ಕೆಲವು ಬೆಕ್ಕುಗಳು ಒಮ್ಮೊಮ್ಮೆ ಮೈನೆಕ್ಕಿಕೊಳ್ಳಲು ಮತ್ತು ಸೂರ್ಯಸ್ನಾನ ಮಾಡಲು ಬರುತ್ತವೆ. ವಾಚ್ಮನ್ ತೂಕಡಿಸುತ್ತ ಕೂರುವ ಆತನ ಕ್ಯಾಬಿನ್ನಂಥ ಇಕ್ಕಟ್ಟಾದ ಸ್ಥಳಗಳಲ್ಲಿ ಗುರುಗುಡುತ್ತ ನಿದ್ರಿಸಲು ಕೆಲವು ಬೆಕ್ಕುಗಳು ಸ್ಥಳ ಕಂಡುಕೊಂಡಿವೆ. ದೇವರು ಈ ಬೆಕ್ಕುಗಳಿಗೆ ಎರಡು ಧ್ವನಿಪೆಟ್ಟಿಗೆಗಳನ್ನು ಕರುಣಿಸಿದ್ದಾನೆ, ಒಂದು ಗುರುಗುಟ್ಟಲು ಮತ್ತು ಇನ್ನೊಂದು ಮಿಂಯಾವ್ ಎನ್ನುವ ಶಬ್ದ ಹೊರಡಿಸಲು ಹಾಗೂ ವಿಶೇಷ ಸಂದರ್ಭಗಳಂದು ನಮ್ಮ ವಸತಿ ಸಂಕೀರ್ಣದ ಕೆಲವು ಬೆಕ್ಕುಗಳು ತಮ್ಮ ರಾತ್ರಿ ಆರ್ಕೆಸ್ಟ್ರಾದ ಮೂಲಕ ಎಲ್ಲ ನಿವಾಸಿಗಳನ್ನು ಎಚ್ಚರವಾಗಿರಿಸುತ್ತವೆ. ಸ್ವಚ್ಛತೆಯ ಬಗ್ಗೆ ಭಾರೀ ಕಾಳಜಿ ಮಾಡುವ ಕೆಲವು ನಿವಾಸಿಗಳು ಈ ಬೂದು ಬೆಕ್ಕುಗಳನ್ನು ಕಂಡಾಗ ಸಿಡಿಮಿಡಿಗೊಳ್ಳುತ್ತಾರೆ. ಈ ಬೆಕ್ಕುಗಳನ್ನು ಚಾಟಿಯಿಂದ ಬಡಿದು ಓಡಿಸಬೇಕು ಎನ್ನುವುದು ಅಂಥ ನಿವಾಸಿಗಳಲ್ಲಿನ ಕೆಲವರ ಅಭಿಪ್ರಾಯ. ಆದರೆ ಈ ಪಾರಿವಾಳಗಳಿಗೆ ಬೆಕ್ಕು ಯಾವ ಕಡೆಗೆ ಹಾರುತ್ತದೆ ಎನ್ನುವುದು ತಿಳಿದಿರುವುದಿಲ್ಲ. ಅಂದಹಾಗೆ, ಬೆಕ್ಕಿಗೆ ಗಂಟೆ ಯಾರು ಕಟ್ಟುತ್ತಾರೆ ಎನ್ನುವುದು ನಮಗೆ ತಿಳಿದಿಲ್ಲ! | Entry #32983 — Discuss
|
ನಾವು ಹಲವಾರು ಮಧ್ಯಮ ವರ್ಗದ ಕುಟುಂಬಗಳಿಗೆ ಆಶ್ರಯವನ್ನು ಒದಗಿಸಿರುವ ಬಹುಮಹಡಿ ಕಟ್ಟಡದ ಸಂಕೀರ್ಣದಲ್ಲಿ ಒಂದು ಸಣ್ಣ ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿದ್ದೇವೆ. ಆದರೆ, ಫೆಲಿಸ್ ಡೊಮೆಸ್ಟಿಕಾ ಕುಟುಂಬದ ಸದಸ್ಯರು ನಮ್ಮ ಸಂಕೀರ್ಣವನ್ನು ಇಷ್ಟಪಟ್ಟಿದ್ದಾರೆ. ಅವರು ಹೋಮೋ ಸೇಪಿಯನ್ಸ್ ಸದಸ್ಯರನ್ನು ಮೀರಿಸಬಹುದು. ಏಕೆಂದರೆ ಹಿಂತೆಗೆದುಕೊಳ್ಳುವ ಉಗುರುಗಳನ್ನು ಹೊಂದಿರುವ ಈ ಚತುರ್ಭುಜಗಳು, ತಮ್ಮ ದೇಶದ ಸೋದರಸಂಬಂಧಿಗಳ ಬಗ್ಗೆ ಹೆಮ್ಮೆಪಡಬಲ್ಲವು- ಸಿಂಹಗಳು, ಹುಲಿಗಳು, ಹೆಬ್ಬೆಕ್ಕುಗಳು ಮತ್ತು ಚಿರತೆಬೆಕ್ಕುಗಳು ನಮ್ಮ ಸುತ್ತಮುತ್ತಲಿನ ಯಾರಿಗೂ ಹೆದರುವುದಿಲ್ಲ. ಹೆಚ್ಚುತ್ತಿರುವ ಬೆಕ್ಕಿನ ಜಾತಿಯ ಜನಸಂಖ್ಯೆಯು ತಮ್ಮ ಉಗುರುಗಳ ಮೇಲೆ ಒಂಬತ್ತು ಜೀವಗಳನ್ನು ಹೊಂದಿದ್ದು ಎಲ್ಲರಿಗೂ ತೊಂದರೆ ನೀಡುತ್ತದೆ ಆದರೆ ಅನೇಕರಿಗೆ ಹಾಸ್ಯದ ಪರಿಹಾರವನ್ನು ನೀಡುತ್ತದೆ. ನಮ್ಮ ಅವೆನ್ಯೂನಲ್ಲಿರುವ ಈ ಬೆಕ್ಕುಗಳು ಪ್ರದೇಶದ ಬಗ್ಗೆ ತಮ್ಮದೇ ಆದ ಕಟ್ಟುನಿಟ್ಟಾದ ಗಡಿರೇಖೆಗಳನ್ನು ಹೊಂದಿವೆ. ನೆಲ ಮಹಡಿ, ಮೊದಲ ಮತ್ತು ಎರಡನೇ ಅಂತಸ್ತಿನ ಮೌಸರ್ಗಳು ನಿಯಂತ್ರಣ ರೇಖೆಗಳಾದ್ಯಂತ ಹಸಿವಿನಿಂದ ಅಡಿಗೆಮನೆಗಳಿಗೆ ನುಗ್ಗುವುದನ್ನು ಹೊರತುಪಡಿಸಿ ತಮ್ಮ ಮಹಡಿಗಳಲ್ಲಿ ಇರುತ್ತವೆ. ತಾರಸಿಯನ್ನು ಯುವಜನರಿಗೆ ಮಾತ್ರ ಮೀಸಲಿಡಲಾಗಿದೆ ಮತ್ತು ಸಾಂದರ್ಭಿಕವಾಗಿ ಹಿಂದಿನ ಸಿಯಾಮ್ನ ಶ್ರೀಮಂತರು ದೇಹವನ್ನು ನೆಕ್ಕಲು ಮತ್ತು ಸೂರ್ಯನ ಸ್ನಾನಕ್ಕಾಗಿ ಬಳಸುತ್ತಾರೆ. ಕೆಲವು ಬಾವುಗಗಳು ಸ್ನೇಹಶೀಲ ಮೂಲೆಗಳನ್ನು ಆರಿಸಿಕೊಳ್ಳುತ್ತವೆ, ಒಳ್ಳೆ ನಿದ್ರೆಗಾಗಿ, ಎಲ್ಲಿ ಇನ್ನೊಂದು ಬೆಕ್ಕು ಬರಲಾಗುವುದಿಲ್ಲವೋ ಅಲ್ಲಿ. ಉದಾಹರಣೆಗೆ ಕಾವಲುಗಾರನ ಕೋಣೆಯಂತಹ ಜಾಗಗಳಲ್ಲಿ ಮತ್ತು ಅವನು ಅಲ್ಲಿ ಸಾಮಾನ್ಯವಾಗಿ ನಿದ್ದೆ ಮಾಡುತ್ತಿರುತ್ತಾನೆ. ದೇವರು ಈ ಬೆಕ್ಕುಗಳಿಗೆ ಎರಡು ಧ್ವನಿ ಪೆಟ್ಟಿಗೆಗಳನ್ನು ಒಂದು ಪರ್ರಿಂಗ್ಗಾಗಿ ಮತ್ತು ಇನ್ನೊಂದು ಮಿಯಾವಿಂಗ್ಗಾಗಿ ಉಡುಗೊರೆಯಾಗಿ ನೀಡಿದ್ದಾನೆ ಮತ್ತು ನಮ್ಮ ಪ್ರದೇಶದಲ್ಲಿನ ಕೆಲವು ಬೆಕ್ಕಿನ ಸೊಪ್ರಾನೊಗಳು ವಿಶೇಷ ಸಂದರ್ಭಗಳಲ್ಲಿ ತಮ್ಮ ರಾತ್ರಿಯ ಆರ್ಕೆಸ್ಟ್ರಾಗಳೊಂದಿಗೆ ಎಲ್ಲಾ ನಿವಾಸಿಗಳನ್ನು ಎಚ್ಚರವಾಗಿರಿಸಿಕೊಳ್ಳುತ್ತವೆ. ಪ್ಯಾಟೆನ್ಸ್ನಲ್ಲಿ ಬೆಕ್ಕಿನಂತೆ ಸ್ವಚ್ಛವಾಗಿರಲು ಬಯಸುವ ಕೆಲವು ನಿವಾಸಿಗಳು ಈ ಬೂದು ಬೆಕ್ಕುಗಳು ತಮ್ಮ ವಸ್ತುಗಳನ್ನು ಅವ್ಯವಸ್ಥೆಗೊಳಿಸಿದಾಗ ಕಿರಿಕಿರಿಗೊಳ್ಳುತ್ತಾರೆ. ನಿವಾಸಿಗಳಲ್ಲಿ ಗಿಡುಗಗಳು ಈ ಬೆಕ್ಕುಗಳನ್ನು ಶಾಶ್ವತವಾಗಿ ಓಡಿಸಬೇಕು ಎಂದು ಬಲವಾಗಿ ಭಾವಿಸುತ್ತಾರೆ. | Entry #33755 — Discuss
|